ಮಂಗಳಂ ಗುರುಶಂಕರ - Mangalam Guru Shankara

|| ಗುರು ಮಂಗಳ ಸ್ತುತಿ ||




ಮಂಗಳಂ ಗುರುಶಂಕರ ಮಂಗಳಂ ಗುರುಶಂಕರ | 

ಜಯ ಮಂಗಳಂ ಗುರುಶಂಕರ | 

ಶುಭ ಮಂಗಳಂ ಗುರುಶಂಕರ ॥ 


ಎಂದಿಗು ಹರಿಯದ ಬಂಧದೊಳಿರುವೆನಾ । 

ಸಂದೇಹಂ ಹರಿಸುತ|ಎನ ಸಂದೇಹಂ ಹರಿಸುತ । 

ಕುಂದದ ಬ್ರಹ್ಮಾನಂದದಿ ಬೆರೆಸಿದೆ ॥ 


ಕಾತರವಳಿಯುವ ರೀತಿಯನರಿಯದೆ । 

ಭೀತಿಯಿಂ ತಪಿಸುವ|ಭವ ಭೀತಿಯಿಂ ತಪಿಸುವ । 

ಪಾತಕಿಯನು ಪರಮಾತ್ಮನ ಮಾಡಿದೆ ॥ 


ರೂಢಿಯೊಳಿರುವೆನಾ ಗೂಢವನರಿಯದೆ । 

ನಾಡೆಲ್ಲಾ ಬಳಸಿದ|ಈ ನಾಡೆಲ್ಲಾ ಬಳಿಸಿದ । 

ಮೂಢನ ಪರಮಾರೂಢನ ಮಾಡಿದೆ ॥ 


ತಾಮಸ ವರ್ಜಿತ ಕಾಮಿತದಾಯಕ । 

ಸೋಮಶೇಖರನಿಭ|ಜೈ ಸೋಮಶೇಖರನಿಭ । 

ಕಾಮಹರಣ ಶಿವರಾಮ ವಿನುತ ಪದ |


ಮಂಗಳಂ ಗುರುಶಂಕರ ಮಂಗಳಂ ಗುರುಶಂಕರ | 

ಜಯ ಮಂಗಳಂ ಗುರುಶಂಕರ | 

ಶುಭ ಮಂಗಳಂ ಗುರುಶಂಕರ ॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು