|| ಗಣಪತಿ ಸ್ತುತಿ ||
ಗಜಮುಖನೆ ಜಯತು ಗಣನಾಥನೇ।
ತ್ರಿಜಗವಂದ್ಯ ಶಿವ ಜಾತನೆ ||ಪ ||
ಸಿದ್ದಿ ವಿನಾಯಕ ಬುದ್ಧಿಪ್ರದಾಯಕ।
ಸಿದ್ಧಪುರಾಣನೆ ಪೂಜ್ಯನೆ ||೧||
ಮಂಗಳ ಮಹಿಮನೆ ತುಂಗ ಸುದೇಹನೆ|
ಗಂಗಾಧರವರ ಬಾಲನೆ||೨॥
ಶೇಷೋದರವರ ಪಾಶಾಂಕುಶಧರ।
ನಾಶರಹಿತ ರವಿ ತೇಜನೆ ||೩||
ಸುರನರ ಸೇವ್ಯನೆ ಪರತರ ಭವ್ಯನೆ।|
ವರ ಪ್ರತಿಭಾಂಕುರ ವಂದ್ಯನೆ ||೪||
0 ಕಾಮೆಂಟ್‌ಗಳು