|| ಗಣಪತಿ ಸ್ತುತಿ||
ಶರಣು ಶರಣು ಬಂದೆವು ಹೇ ಬೆನಕ
ಕೈಯ ಹಿಡಿದು ಕಾಯೋ ಕಡೆತನಕ ||ಪ||
ಮೂಷಿಕ ವಾಹನ ಮೋದಕ ಪ್ರಿಯ
ವರಗೌರೀ ತನಯ |
ನಿನ್ನ ನೆನೆಯಲು ಗೈಯುವ ಕಾಯಕೆ
ಭಯವೊಂದಿರದಯ್ಯ |
ಪೂಜೆಗೆ ಪ್ರಥಮಸ್ಥಾನವು ನಿನಗೆ
ವಂದಿಪೆ ಗಣರಾಯsss ||೧||
ಲಂಬೋದರನೆ ಏಕದಂತನೆ
ಚಂದ್ರನ ಗರ್ವ ಮುರಿದವನೆ |
ರಾವಣ ತಂದ ಪರಶಿವನಾತ್ಮವ
ಲಿಂಗ ದಕ್ಕಲು ಬಿಡದವನೆsss |
ವಿದ್ಯಾ ಬುದ್ಧಿಗೆ ಕರ್ತೃವು ನೀನೆ
ಹೇ ವಿಘ್ನೇಶ್ವರನೇsss ||೨||
ಪರಮಪೂಜ್ಯನೆ ಪಾಹಿ ಎಂಬುವರ
ಪಾಲನೆ ಭಾರ ಹೊತ್ತವನೆ |
ನಿನ್ನ ಚರಣದಲಿ ತಲೆಯನಿತ್ತಿಹೆವು
ನಮ್ಮನು ಕಾಯ್ವದು ನಿನ್ನ ಹೊಣೆ |
ವಿದ್ಯೆಗೆ ಎಂದೂ ಬರವಿರದಂತೆ
ಸಲಹೋ ಗಜಮುಖನೇsss ||೩||
0 ಕಾಮೆಂಟ್‌ಗಳು