ಕರುಣಾ ಮೂರ್ತಿಯೇ ಶಾರದೆ - Karuna Murthiye Sharade

|| ಸರಸ್ವತಿ ಸ್ತುತಿ ||




ಕರುಣಾ ಮೂರ್ತಿಯೇ ಶಾರದೆ 

ಮಾತೆಯೇ ನಿನ್ನನರಸಿ ಬಂದೆ 

ಭವವಿದು ಬಲು ಕಹಿ ಸಿಹಿ 

ನಾ ಅರಿಯೆ ಭುವನೇಶ್ವರಿ  ವರದೇ ||ಪ||


ಅಜ್ಞಾನದ ಕತ್ತಲೆಯಲಿ ಸಿಲುಕಿ 

ಆಲೆದಲೆದು ನಾ ಬಂದೆ 

ಆಶಾಕಿರಣವು ನಿನ್ನ ಸ್ಮರಣೆಯು 

ಜಗದೀಶ್ವರಿ ವರದೆ || ೧ ||


ವೀಣೆಯ ಪಿಡಿದಾ ಕರಗಳನೊಮ್ಮೆ ಎನ್ನಯ 

ಶಿರದ ಮೇಲಿರಿಸೆ 

ಸ್ವರ ಶ್ರುತಿ ಲಯ ತಾಳ ಹೊಳೆಯಾಗಿ ಹರಿಸೇ 

ಸ್ವರ ಶ್ರುತಿ ರಂಜಿನಿ ಸಂಗೀತ ವಾಹಿನಿ || ೨ ||


ತಂದೆ ತಾಯಿಯು ನೀನೆ ಬಂಧು ಬಳಗ ನೀನೆ 

ಭವ ಬಂಧನ ಕಳೆವ ಭಾಗ್ಯದ ನಿಧಿಯೇ 

ಕರದೊಳು ಪುಸ್ತಕ ಮಾಲೆಯ ಪಿಡಿದಿಹೇ 

ಅಜ್ಞಾನ ಕಳೆಯತ ಸುಜ್ಜಾನವ ನೀಡೆ || ೩ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು