|| ಗಣಪತಿ ಸ್ತುತಿ ||
ಜನುಮ ತಾಳಿದ ಗಣಪ ಜನುಮ ತಾಳಿದ |2|
ಗೌರಿ ಕುಂಡದಿ ಶಿರಧಿ ಮೆರೆವ
ಶ್ರೀ ವಿನಾಯಕ ಭಾರತಿ ಸ್ವಾಮಿ
ಜನುಮ ತಾಳಿದ ಗಣಪ ಜನುಮ ತಾಳಿದ |2|
ತಾಯಿ ಪಾರ್ವತೀ ದೈವೀ ಶಕ್ತಿಯ
ಲೋಕಗಳಿಗೆ ಸಾರಲು
ತಂದೆ ಶಿವನ ದಿವ್ಯಶಕ್ತಿಯ ಭಕ್ತ ಜನಕೆ ಹರಸಲು
ಪ್ರಣವ ಮಂತ್ರಧಿ ಅಕ್ಷರಗಳ ರೂಪವನ್ನು ತಾನು ಧರಿಸಿ
ವಿಘ್ನ ನಾಶವಾ ಮಾಡಿ ಭಕ್ತರ
ಕಾರ್ಯಗಳಿಗೆ ಸಿದ್ದಿಯ ತೋರಲು
ಜನುಮ ತಾಳಿದ ಗಣಪ ಜನುಮ ತಾಳಿದ |
ಶ್ರಮತ ಜನಕೆ ನಾಥನಾಗಿ ಪ್ರಥಮ ಪೂಜೆಯ ಪಡೆಯಲು
ಸುಂದರನೆಂದು ಮೆರೆವ ಚಂದ್ರನ ಗರ್ವ ವನ್ನು ಅಳಿಸಲು
ಮೂಷಿಕಾಸುರನ ಗರ್ವ ಮುರಿದು ವಾಹನವಾಗಿ
ತಾನು ಪಡೆದು ಪಾಂಡವರಿಂದ ಪೂಜೆ ಪಡೆದು
ಮರಳಿ ರಾಜ್ಯವ ತಾನು ಪಡೆಯಲು
ಜನುಮ ತಾಳಿದ ಗಣಪ ಜನುಮ ತಾಳಿದ |
0 ಕಾಮೆಂಟ್ಗಳು