ಕಾಯೆ ಕರುಣಿ ತಾಯೇ - Kaye Karuni Thaye

|| ದೇವಿ ದುರ್ಗಾ ಸ್ತುತಿ ||

ರಚನೆ : ಭದ್ರಗಿರಿ ಅಚ್ಯುತದಾಸರು  



ಕಾಯೆ ಕರುಣಿ ತಾಯೇ ಶ್ರೀಹರಿ ಜಾಯೆ 

ಹೇ ಮಹಾಮಾಯಿ ॥ ಪ॥ 


ಮಾಯಾ ಪಾಶದಿ ಬಿದ್ದೂ ಬೇಡುತಿರುವೆನೆ | 

ಉಪಾಯ ಕಾಣೆನಮ್ಮಾ ತೋಯಜಾಂಬಕಿ ॥೧॥ 


ಘಾಸಿ ಪಟ್ಟೇನು ಭೋಗದಾಸೆಗೇ ಸಿಲುಕಿ ನಾ|। 

ಮೋಸ ಹೋದೆನು ಮನದ ಕ್ಲೇಶ ಕಳೆದು ಎನ್ನ ॥೨॥ 


ಶೇಷಶಯನ ಮೂಲ ನಾರಾಯಣ ಹರಿಯ | 

ದಾಸನಾಗಿಸುವ ಎನ್ನ ಆಸೆ ಪೂರೈಸು ॥೩॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು