|| ಶಿವ ಸ್ತುತಿ ||
ರಚನೆ : ಶ್ರೀ ವಿಜಯದಾಸರು
ಶಂಭೋ ಸ್ವಯಂಭು ಸಂಭವ-ನಂಬಿದೆ ಕಾಯೊ
ಜಂಭಾರಿನುತ ಅಭವ
ಅಂಬರ ಪುರಹರ ಸಾಂಬ ತ್ರಯಂಬಕ
ಶಂಬರಾರಿ ರಿಪುಗಂಭೀರ ಕರುಣಿ
ಭಸಿತ ಭೂಷಿತ ಶರೀರ-ಭಕ್ತರುದ್ಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಹಾರ-ಪಾವನಕಾರ
ತ್ರಿಶೂಲ ಡಮರುಗಧರ
ನೊಸಲನಯನ ವಿಕಸಿತಾಂಬುಜ ಮುಖ
ಶಶಿಧರ ಮತ್ತರಕ್ಕಸ ಮದ ಮರ್ದನ
ಘಸಣೆಗೊಳಿಪ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜ ಪಾದವ ತೋರೊ ||೧||
ರಜತ ಪರ್ವತ ನಿವಾಸ ನಿರ್ಮಲ ಭಾಸ
ಗಜವೈದ್ಯನಾಶ ಗಿರೀಶ
ಸುಜನರ ಮನೋವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಕೆಡಸಿದೆ
ಅಜಗರ ಮಂದಿ ಗಜಮುಖ ಜನಕನೆ
ಗಜಗಮನ ಮುನಿ ತನುಜನ ಕಾಯ್ದನೆ
ವಜ್ರಮುನಿ ವಂದಿತ ಭಜಿಸುವೆ ನಿನ್ನ||೨||
ಮಧುರಾಪುರಿ ನಿಲಯ ಮೃತ್ಯುಂಜಯ
ಸದಮಲ ಸುಮನಗೇಯ
ಸದಾ ನಮಿಪರ ಹೃದಯದೊಳಗುಳ್ಳ ಭಯ-
ಸದೆಯುತ್ತ ಕೊಡು ಅಭಯ
ಸದಾಶಿವ ಜಾಹ್ನವಿ ಧರಕೃತ ಮಾರಾ
ನದೀತೀರದಿ ವಾಸವಾಗಿಪ್ಪ ಸೌಂದರ್ಯ
ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ ||೩||
0 ಕಾಮೆಂಟ್‌ಗಳು