||ವೆಂಕಟಾಚಲಯ್ಯ ಅವಧೂತ ಸ್ತುತಿ||





ರಾಮ ಬಂದ ಶಾಮ ಬಂದ 

ಶಿವನೇ ತಾ ಬಂದ ತಂಗಿ ಶಿವನೇ ತಾಬಂದ 

ಸಖರಾಯ ಪುರವಾಸಿ ಗುರುನಾಥ ಬಂದ||ಪ||


ಅಣುವು ಇವನೇ ಮಹಿಮ ಇವನೇ ಎಲ್ಲೆಲ್ಲೂ ಇವನೆ 

ತಂಗಿ ಜಗವೆಲ್ಲಾ ಇವನೇ 

ಮನಃ ಶುದ್ಧಿ ಇದ್ದರಲ್ಲಿ ನಲಿದಾಡುತಾನೇ ||೧||


ನದಿಯು ಇವನೇ ಸಾಗರ ಇವನೇ ಗಂಗೆಯ ಇವನೆ 

ತಂಗಿ ಗಂಗೆಯು ಇವನೆ

ಸೂರ್ಯ ಚಂದ್ರರ ಬೆಳಗುವಂತ ಚೈತನ್ಯ ಇವನೇ||೨||


ವೇದ ಇವನೇ ಶಾಸ್ತ್ರ ಇವನೇ ಗ್ರಹಬಲನು ಇವನೆ

ತಂಗಿ ಗ್ರಹಬಲನು ಇವನೇ, ವೇದ ಪುರುಷ 

ಜಗವ ಬೆಳಗೊ ನರನಾಗಿದ್ದಾನೆ ॥೩॥ 


ಹರಿಯು ಇವನೆ ಹರನು ಇವನೆ ಬ್ರಹ್ಮಾನು ಇವನೆ 

ತಂಗಿ ಬ್ರಹ್ಮಾನು ಇವನೆ 

ಕರ್ಮ ಕಳೆದು ಭಕ್ತಿ ಇತ್ತು ಉದ್ಭರಿಸೋನಿವನೆ ॥೪॥ 


ಹುಟ್ಟೋನಿವನೆ ಸಾಯೋನಿವನೆ ಚಿರಂಜೀವಿ ಇವನೆ

ತಂಗಿ ಚಿರಂಜೀವಿ ಇವನೆ 

ವಿಶ್ವವನ್ನೇ ವ್ಯಾಪಿಸಿದಂಥ ಓಂಕಾರ ಇವನೆ ॥೫॥ 


ಸಗುಣನು ಇವನೆ ನಿರ್ಗುಣ ಇವನೆ ನಿರಾಕಾರ ಇವನೆ 

ತಂಗಿ ನಿರಾಕಾರ ಇವನೆ 

ಅಘಟಿತ ಘಟನ ತೋರುವಂಥ ಗುರನಾಥ ಇವನೆ॥೬॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು