ಗುರುಸೇವೆ ನೀ ಮಾಡು ತಂಗಿ - Guruseve Nee Maadamma Thangi

|| ಗುರು ಸ್ತುತಿ ||



ಗುರುಸೇವೆ ನೀ ಮಾಡು ತಂಗಿ 2.

ಶುದ್ಧ ಮನದಿಂದ ಗುರು ಧ್ಯಾನ ಮಾಡಮ್ಮ ತಂಗಿ||ಪ||


ಭವವೆಂಬ ಸಾಗರದಲ್ಲಿ ದಾಟಿ 

ಗುರು ಚರಣವೆಂಬ ನಾವೇ ಹತ್ಲಿಲ್ಲಿ ||2||

ಗುರುವಾಗ್ನಿ ಮೀರದಿದ್ದಲ್ಲಿ ||2||

ಆಗ ಗುರುನಾಥ ಕಾಯುವನು ಕಷ್ಟ ಬಂದಲ್ಲಿ ||೧||


ಸಾವು ನೋವಿನ ವಿವರ ಅರಿತು 

ನೀನು ಸಾಧು ಸಜ್ಜನರ ಸಂಗದಿ ಬೆರೆತು||2||

ಮನಕಲೇಶ ಬಿಡುವುದು ಒಳಿತು ||2||

ಆಗ ಮುಕ್ತಿಯ ಬೀಜವು ಸಿಗುವುದು ಮೊಳೆತು||೨||


ಮೂಳೆ ಮಾಂಸದ ತೊಗಲು ದೇಹ 

ತಂಗಿ ಇದರಲ್ಲಿ ತುಂಬಿದ ವಿಧವಿಧ ಮೋಹ||2||

ಎಲ್ಲಾ ಬೇಕೆನ್ನುವ ದಾಹ ||2||

ತಂಗಿ ಗುರುಪಾದ ಮುಟ್ಟಲು ಕಳೆವ ವ್ಯಾಮೋಹ||೩||


ಪರತತ್ವ ನೀ ತಿಳಿಯ ತಂಗಿ 

ನಿನ್ನ ಅಂತರಾತ್ಮವನು ಅರಿಯಮ್ಮ ತಂಗಿ||2||

ಪರ ನಿಂದೆ ನೀ ಬಿಡು ತಂಗಿ ||2||

ನಿನ್ನ ಅಹಂಭಾವ ಹಿಂಗಲು ನೀ ಕೋಮಲಾಂಗಿ||೪||

  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು