ಎತ್ತಿದಳಾರುತಿಯ ಶ್ರೀ ತುಳಸಿಗೆ - Ettidalarutiya Sri Tulasige

|| ತುಳಸಿ ಆರತಿ ಹಾಡು ||



ಎತ್ತಿದಳಾರುತಿಯ ಶ್ರೀ ತುಳಸಿಗೆ 

ಭಕ್ತಿ ಭಾವಗಳಿಂದಲಿ ||ಪ||

ಎತ್ತಿದಳಾರುತಿ ಸತ್ಯ ಧರ್ಮನ ಸತಿ 

ಅಚ್ಯುತನ ತೋರೆಂದು ಅತೀ ದೈನ್ಯದಿಂದಲಿ||ಅ.ಪ|| 


ಹಾರಕೇಯೂರದಿಂದಾ ಚಿತ್ರಾವಳಿ 

ನಾರಿ ತುಳಸಿಗೆ ರಚಿಸಿ 

ಚಾರುಹಸ್ತಗಳಿಂದ ನಾರೀ ಬೊಗಸೆ ಒಡ್ಡಿ 

ವಾರಿಜನಾಭನ ತೋರಿಸೆಂದೆನುತಲಿ ||೧||


ಅನ್ನಬೇಡೋ ಋಷಿಗಳು ಯತಿಗಳು ಬಂದು 

ನನ್ನನ್ನು ಕಾಡುತಿಹರು 

ಪನ್ನಗವೇಣಿಯೇ ನಿನ್ನ ಮೊರೆ ಹೊಕ್ಕೇನೆ 

ಪನ್ನಗಶಯನನ ತೋರಿಸೆಂದೆನುತಲಿ ||೨||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು