ಶತಕೋಟಿ ತೇಜನಿಗೆ ಮುತ್ತಿನಾರತಿ - Shathakoti Thejanige Muttinarathi

||ಶ್ರೀ ಸತ್ಯನಾರಾಯಣ ಆರತಿ ಹಾಡು||



ಶತಕೋಟಿ ತೇಜನಿಗೆ ಮುತ್ತಿನಾರತಿ 

ನವಶೋಭ ನಿಲಯನಿಗೆ ಕೆಂಪಿನಾರತಿ 

ಜ್ಯೋತಿ ಸ್ವರೂಪಗೆ ಕರ್ಪೂರದಾರತಿ 

ಸತ್ಯನಾರಾಯಣ ಗೆ ದಿವ್ಯಆರತಿ 


ಸತ್ಯನಿಕೇತನ ಸದ್ಗತಿ ಸಾಧನ 

ಸಕಲ ದೇವತಾ ಸ್ವರೂಪಗೆ 

ನಿಖಿಲ ಚೈತನ್ಯ ಇಷ್ಟಾರ್ಥದಾಯಕ 

ಶ್ರಿತಜನ ಪಾಲಗೆ ಮಂಗಳಾರತಿ 


ಮಧುಸೂದನನಿಗೆ ಮಾಧವ ಮೂರ್ತಿಗೆ 

ಮಂಗಳ ರೂಪಗೆ ಧರ್ಮಾವತಾರಗೆ 

ಮೂಜಗದೊಡೆಯಗೆ ನಾರಾಯಣಗೆ 

ಎತ್ತುವಾ ಬನ್ನಿರಿ ಭಕ್ತಿ ಆರತಿ 


ಆದ್ಯಂತ ರಹಿತನಿಗೆ ಆರಾಧನಾ 

ನಿಗಮ ಸಂಚಾರಿಗೆ ನೀರಾಜನ 

ಪರಮಾತ್ಮ ರೂಪಗೆ ಪಂಚಾರತಿ 

ಸತ್ಯನಾರಾಯಣಗೆ ನಿತ್ಯ ಆರತಿ 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು