ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮಿ - Sringaravagihalu Sri Mahalakshmi

|| ಲಕ್ಷ್ಮಿ ಸ್ತುತಿ ||



ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮಿ||ಪ||

ಬಂಗಾರು ಮಂಟಪದಿ ಬಂದು ಕುಳಿತಿಹಳು||ಅ.ಪ||


ತಾವರೆಯ ಕಮಲದಲ್ಲಿ ಜನಿಸಿಹಳು ಶ್ರೀಲಕ್ಷ್ಮಿ 

ಭಾನು ಕೋಟಿ ಪ್ರಭೆಯಂತೆ ಬೆಳಗುತಿಹಳು। 

ಬಿಳಿಯ ಸೀರೆಯನ್ನುಟ್ಟು ಹೊಳೆವ ಕುಪ್ಪಸ ತೊಟ್ಟು | 

ನಿಡು ಮುಡಿಯ ಮೇಲೆ ತಾ ಬರುತಿಹಳು||೧॥ 


ಎಡಬಲದಿ ಗಜಲಕ್ಷ್ಮಿ ನಡುವೆ ತಾವರೆ ಲಕ್ಷ್ಮಿ | 

ಥಳಥಳನೇ ಹೊಳೆಯುವಳು ಶ್ರೀ ಮಹಾಲಕ್ಷ್ಮಿ 

ಬಡವರಾದವನು ಬಿಡದೆ ಕಾಯ್ವಳು ಲಕ್ಷ್ಮಿ 

ಸಡಗರದಿ ಬರುತಿಹಳು ಶ್ರೀ ಮಹಾಲಕ್ಷ್ಮಿ ॥೨॥ 


ನರಸಿಂಹ ವಿಠಲನ ಹರಸಿ ಸ್ವೀಕರಿಸಮ್ಮ 

ಸರಸವಾಡುತಲೊಮ್ಮೆ ಸಲಹು ಮಾತೆ | 

ಮಾಡಿದ ಅಪರಾಧವನ್ನು ಮನದಿ ಎಣಿಸದೆ ನೀನು| 

ಕಾಪಾಡಬೇಕೆಂದು ಪಾದಕ್ಕೆರಗುವೆನು॥|೩॥ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು