ಮಂಗಳವೆನ್ನಿ ಮಹಾಲಕ್ಷ್ಮಿಗೀಗ - Mangalavennni Mahalakshmigeega

|| ಲಕ್ಷ್ಮಿ ಸ್ತುತಿ ||





ಮಂಗಳವೆನ್ನಿ ಮಹಾಲಕ್ಷ್ಮಿಗೀಗ 

ಶ್ರೀರಂಗನರಸಿ ರಮಾದೇವಿಗೆ ಬ್ಯಾಗ ॥ಪ॥ 


ಸಿಂಧುನಂದನೆ ನಂದನಂದನ ಎದೆಯಲ್ಲಿ 

ಹೊಂದಿಕೊಂಡಿರುವಂಥ ಸುಂದರ ಸಿರಿಗೆ ।೧॥ 


ವರಮಣಿ ವೈಜಯಂತಿ ಹರಿಯ ಶ್ರೀವತ್ಸದಲ್ಲಿ 

ಸರಸವಾಗಿರುವಂಥ ವರಮಹಾಲಕ್ಷುಮಿಗೆ ॥೨॥ 


ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ 

ಅರಳು ಮಲ್ಲಿಗೆಮೊಗ್ಗು ವರವ ಕೊಡೆನಗೆ ॥೩॥ 


ರಂಗನರಸಿ ಬೆಳ್ಳಿ ಬಂಗಾರವೆನಗಿತ್ತು 

ಕಂಗಳಿಂದಲಿ ನೋಡಿ ಮಂಗಳ ನೀಡೆ ॥೪॥ 


ಆದಿನಾರಾಯಣ ಅನಂತಗುಣ ಪರಿಪೂರ್ಣನಾದ 

ಭೀಮೇಶಕೃಷ್ಣನ ಮಡದಿಗಿಂದು ॥೫॥ 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು