ಹತ್ತಾವತಾರವ ತಾಳಿದ ದೇವಗೆ - Hattavatarava Thalida Devage

ಆರತಿ ಹಾಡು (ದಶಾವತಾರ ಸ್ತುತಿ )



ಹತ್ತಾವತಾರವ ತಾಳಿದ ದೇವಗೆ

ಮುತ್ತಿನಾರತಿಯ ಬೆಳಗೀರೆ ||ಪ||



ಕುತ್ತು ಬರದ ಹಾಗೆ | ನಿತ್ಯ ಭಕ್ತರನಾ-

ಪತ್ತಿನಿಂದಲಿ ನಮ್ಮ | ರಕ್ಷಿಪ ದೇವಗೆ || ಅ.ಪ.||



ದುರುಳ ದಾನವನನ್ನು | ಕೊಂದು ವೇದವ ತಂದ

ಗಿರಿಯನ್ನು ಬೆನ್ನ ಮೇಲೆ|ಪೊತ್ತು ನೀರೊಳು ನಿಂತ ||

ಧರಣಿಯನುದ್ಧರಿಸಿ | ತರಳನ ಸಲಹಿದ

ವೀರವಟು ವೇಷದಿ | ದಾನ ಬೇಡುತ ಬಂದ ||೧||



ಭೂಮಿಯೊಳು ಕ್ಷತ್ರಿಯರ | ಕುಲನಾಶ ಮಾಡಿದ

ಆ ಮಹಾ ರಾವಣನ | ಕೊಂದು ಸೀತೆಯ ತಂದ ||

ಕಮಲಾಕ್ಷಿಯರೊಳು | ರಾಸಲೀಲೆಯಾಡಿದ

ರಮಣೀಯರ ವ್ರತ|ಭಂಗಗೈದ ಮೋಹನಾಂಗ||೨||


ಪುಂಡರ ಸದೆದು | ಕೆಂಡವ ಕಾರುತ

ಚಂಡ ಪ್ರಚಂಡನಾಗಿ | ಕುದುರೆಯನೇರಿದ ||

ಪಂಡರಿನಾಥ ಶ್ರೀ | ಗುರುಪ್ರಿಯ ವಿಠಲಗೆ

ಮಂಡೆ ಬಗ್ಗಿಸಿ | ಮಂಗಳಾರತಿ ಬೆಳಗಿರೆ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು