ಮನವೇ ಮಂತ್ರಾಲಯ - Manave Mantralaya

|| ಗುರು ರಾಘವೇಂದ್ರ ಸ್ತುತಿಃ ||




ಮನವೇ ಮಂತ್ರಾಲಯ 

ನೆಲೆಸಿಲ್ಲಿ ಗುರುವೇ ಕರುಣಾಮಯ||ಪ||


ತಂದೆಯು ತಾಯಿಯು ಬಂಧು ನೀನೆ 

ತಮವನು ಕಳೆಯುವ ದೀವಿಗೆ ನೀನೆ 

ಕಲುಮಶ ತೊಳೆವ ಗಂಗಾಜಲ ನೀನೆ 

ಕಂಬನಿ ಒರೆಸುವ ಕರುಣಾಳು ನೀನೆ 

ಗುರುವೇ ಕರುಣಾಮಯ... ||೧||


ಕರೆದಲ್ಲಿಗೆ ಬರುವ ಕಾಮಧೇನು 

ಕಾಮಿತಗಳನೀವ ಕಲ್ಪ ಸುಮವು 

ಮಂಜುಳ ವೀಣಾ ಗಾನವಿನೋದಿ 

ಮಹಿಮಾನ್ವಿತ ಮಂತ್ರಾಲಯ ವಾಸಿ 

ಗುರುವೇ ಕರುಣಾಮಯ... ||೨||


ನರಹರಿ ಪದಕಮಲ ಸೇವಿಪ ಭ್ರಮರ 

ಮರಳಿ ಧರೆಗಿಳಿದ ಗುರು ರಾಘವೇಂದ್ರ 

ಶಿರಬಾಗಿ ನಮಿಸುವೆ ತವ ಪದ್ಮ ಚರಣಕೆ 

ಕರುಣದಿ ಕಾಯೋ ಗುರು ಸಾರ್ವಭೌಮ 

ಗುರುವೇ ಕರುಣಾಮಯ... ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು