|| ಶ್ರೀರಾಮ ಸ್ತುತಿ ||
ಜಯ ಜಯತು ಶೀ ರಾಮ ಇನ ಕುಲಾಬ್ಧಿಗೆ ಸೋಮ
ಜಯ ಜಯ ಸುಗುಣ ಸ್ತೋಮ ಸಾರ್ವಭೌಮ ಲಲಾಮ
ಜಯ ಜಯ ರಮಾಧಾಮ ದುರುಳ ದೈತ್ಯ ವಿರಾಮ
ಜಯ ಜಯ ಸುಜನಪ್ರೇಮ ಪೂರ್ಣಕಾಮ||ಅ.ಪ||
ಜಯ ಜಯತು ಶೀರಾಮ |
ನಿನ್ನ ಅವತಾರ ದುಷ್ಟರಿಗೆ ಬಲು ಪರಿ ಘೋರ
ನಿನ್ನ ಅವತಾರ ಶಿಷ್ಟರಿಗೆ ನಿರಯವೆ ದೂರ |
ನಿನ್ನ ಅವತಾರ ಪರಿಹರಿಸಿತೀ ಭೂಭಾರ
ನಿನ್ನ ಪೋಲುವ ಧೀರರಿನ್ನುಂಟೆ ಶೂರ ||೧||
ದಶಕಂಠನಿಗೆ ಪಾಪ ಪರಿಪೂರ್ಣವಾಯಿತೊ
ದಶರಥನ ಜನ್ಮಾಂತರದ ಸುಕೃತವೊದಗಿತೊ |
ದಶ ದಿಗಾಂತರದೊಳಗೆ ಅಸಮ ಪರ ದೈವನೆ
ತ್ರಿದಶರಿಂದ ನೀನವತರಿಸಿದೆ ಶೀ ರಾಮ ||೨||
ಅರಣ್ಯದೊಳಗೊಬ್ಬ ಧಾರುಣಿ ಸುರ ಅಂದು
ನೀರೊಯ್ವುತಿರೆ ತನ್ನ ಆರ್ಯರಿಗೆ ಅವನ
ಸಂಹಾರ ಮಾಡಲು ಶಪಿಸೆ ಅದೆ ಕಾರಣದಳುದಿಸಿ
ಧೀರ ಅಭಿನವ ಜನಾರ್ದನ ವಿಠಲ ಮೆರೆದೆ ||೩||
0 ಕಾಮೆಂಟ್‌ಗಳು