|| ಶಾರದಾ ಸ್ತುತಿ ||





ಸರಸಿಜೋದ್ಭವರಾಣಿ ಸರಸಿಜಾಸನ ವಾಣಿ 

ಕಲ್ಯಾಣಿ ಗೀರ್ವಾಣಿ ನಿನಗಾರತಿ 

ಸುಜ್ಞಾನವರ್ಷಿಣಿ ಬ್ರಹ್ಮಾಣಿ ಕಲ್ಯಾಣಿ 

ಮಧುರವೀಣಾಪಾಣಿ ನಿನಗಾರತೀ 

ಶ್ರೀಮಹಾಸರಸ್ವತಿ ನಿನಗಾರತೀ ॥ ಪ||


ಶ್ರೀಚಕ್ರರೂಪಿಣಿ ಶೃಂಗೇರಿವಾಸಿನಿ 

ಶಾರದಾಮಾತೆಯೇ ನಿನಗಾರತೀ 

ಗುರುವರ ಶಂಕರ ಸ್ಥಾಪಿತೆ ಪೂಜಿತೆ 

ವರದೇಕೃಪಾಕರಿ ದೀಪಾರತೀ 

ಶ್ರೀಮಹಾಸರಸ್ವತಿ ನಿನಗಾರತೀ ॥೧॥ 


ಕಾವ್ಯವಿಲಾಸಿನೀ ಗೀತಾವಿನೋದಿನೀ 

ಶಾಸ್ತ್ರಸ್ವರೂಪಿಣಿ ನಿನಗಾರತೀ 

ಸತ್ಯ ಸುಂದರ ಶಿವತತ್ವರೂಪಿಣಿ 

ಪರಬ್ರಹ್ಮರೂಪಿಣಿ ನಿನಗಾರತಿ 

ಶ್ರೀಮಹಾಸರಸ್ವತಿ ನಿನಗಾರತೀ ||೨||


ಶ್ರೀಮಹಾಸರಸ್ವತಿ ನಿನಗಾರತೀ 

ಶ್ರೀಮಹಾಸರಸ್ವತಿ ನಿನಗಾರತೀ ||ಶುಭಂ||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು