|| ಗುರು ಶಂಕರ ಮಂಗಳ ಸ್ತುತಿ ||
ಮಂಗಳಂ ಗುರುಶಂಕರ ಮಂಗಳಂ ಗುರುಶಂಕರ |
ಜಯ ಮಂಗಳಂ ಗುರುಶಂಕರ |
ಶುಭ ಮಂಗಳಂ ಗುರುಶಂಕರ ॥
ಎಂದಿಗು ಹರಿಯದ ಬಂಧದೊಳಿರುವೆನಾ ।
ಸಂದೇಹಂ ಹರಿಸುತ । ಎನ ಸಂದೇಹಂ ಹರಿಸುತ ।
ಕುಂದದ ಬ್ರಹ್ಮಾನಂದದಿ ಬೆರೆಸಿದೆ ॥
ಕಾತರವಳಿಯುವ ರೀತಿಯನರಿಯದೆ ।
ಬೀತಿಯಿಂ ತಪಿಸುವ । ಭವ ಭೀತಿಯಿಂ ತಪಿಸುವ ।
ಪಾತಕಿಯನು ಪರಮಾತ್ಮನ ಮಾಡಿದೆ ॥
ರೂಢಿಯೊಳಿರುವೆನಾ ಗೂಢವನರಿಯದೆ ।
ನಾಡೆಲ್ಲಾ ಬಳಸಿದ | ಈ ನಾಡೆಲ್ಲಾ ಬಳಿಸಿದ ।
ಮೂಢನ ಪರಮಾರೂಢನ ಮಾಡಿದೆ ॥
ತಾಮಸ ವರ್ಜಿತ ಕಾಮಿತದಾಯಕ ।
ಸೋಮಶೇಖರನಿಭ | ಜೈ ಸೋಮಶೇಖರನಿಭ ।
ಕಾಮಹರಣ ಶಿವರಾಮ ವಿನುತ ಪದ |
ಮಂಗಳಂ ಗುರುಶಂಕರ ಮಂಗಳಂ ಗುರುಶಂಕರ |
ಜಯ ಮಂಗಳಂ ಗುರುಶಂಕರ ।
ಶುಭ ಮಂಗಳಂ ಗುರುಶಂಕರ ॥
0 ಕಾಮೆಂಟ್‌ಗಳು