|| ಗಣಪತಿ ಸ್ತುತಿ ||
ಶಂಕರ ಪ್ರಿಯ ತನಯಾ |
ಮೋದದಿ ವರಗಳ ನೀಡಯ್ಯಾ।
ಅನೇಕ ರೂಪದಿ ಶೋಭಿಪ ಮಹನೀಯ ॥ಪ॥।
ಚಂದನ ಲೇಪಿತ ಚಂದದಿ ನಲಿವ |
ಸಿಂಧೂರ ಅರ್ಚಿತನಾಗಿ ಮೆರೆವ ।
ವಂದಿಸಿದವಗಾನಂದವ ಕೊಡುವ ॥ ೧॥
ಏಕದಂತನೇ ಮಹಾ ರುದ್ರ ಕುಮಾರಾ |
ವಾಕು ವಾಹನನ ಮಹಿಮೆ ಅಪಾರ ।
ಲೋಕಭರಿತ ಪೊರೆ ಜಗದಾಧಾರ |।೨॥
ಕರುಣಾಕರ ಕರಿಮುಖ ಶೋಬಭಿಪನೆ ।
ಕರದಲಿ ಪಾಶಾಂಕುಶ ಧರಿಸಿಹನೆ ।
ಶರಣು ಜನರ ಪೊರೆ ಆಲಿಪ ತರಳನೆ ।॥೩॥
0 ಕಾಮೆಂಟ್‌ಗಳು