|| ಮಹಾಲಕ್ಷ್ಮಿ ಸ್ತುತಿ ||
ಬಂದಾಳೋ ನಮ್ಮಾ ಮನೆಗೆ|ಶ್ರೀ ಮಹಾಲಕ್ಷ್ಮೀ|
ಸಂಜೆಯಾ ಹೊತ್ತಿನಲ್ಲೀ||
ಬಂದಾಳೋ ನಮ್ಮ ಮನೆಗೆ|ನಿಂದಾಳೋ ಗೃಹದಲ್ಲಿ|
ನಂದ ಕಂದನ ರಾಣಿ|ಇಂದೀರೆ ನಮ್ಮಾ ಮನೆಗೆ||ಅ. ಪ||
ಹೆಜ್ಜೆ ಮೇಲೆ ಹೆಜ್ಜೆಯ ನಿಕ್ಕುತಾ|
ಗೆಜ್ಜೆ ಕಾಲು ಘಲ್ಲು ಘಲ್ಲೆಂದೇನೂತ |
ಮೂರ್ಜಗ ಮೋಹಿಸುತ|ಮುರಹರನ ರಾಣಿಯು |
ಸಂಪತ್ತು ಕೊಡಲಿಕ್ಕೆ ವಾಸುದೇವರ ಸಹಿತ ||೧||
ಶ್ರಾವಣ ಮಾಸ ಸಂಪತ್ತು |
ಶುಕ್ರವಾರ ಪೂರ್ಣಿಮೆ ದಿನದಲ್ಲಿ|
ಭೂಸುರರೆಲ್ಲ ಸೇರಿ|ಸಾಸಿರ ನಾಮ ಪಾಡಿ |
ವಾಸವಾಗಿರಲಿಕ್ಕೆ ವಾಸುದೇವನ ಸಹಿತ||೨||
ಕನಕವಾಯಿತು ಮಂದಿರ|ಜನನಿ ಬರಲು|
ಜಯ ಜಯ ಜಯವೆನ್ನಿರೇ|
ಸನಕಾದಿ ಮುನಿಗಳ|ಸೇವೆಯ ಸ್ವೀಕರಿಸಿ |
ಕನಕವಲ್ಲಿಯೂ ತನ್ನ|ಕಾಂತನ್ನ ಕರೆದು ಕೊಂಡು||೩||
ಉಟ್ಟ ಪೀತಾoಬರ ಹೊಳೆಯುತ್ತಾ |
ಖರದಲ್ಲಿ ಗಟ್ಟಿ ಕಂಕಣ ವಿಡುತಾ |
ಸೃಷ್ಠಿ ಗೋಡೆಯ ನಮ್ಮ|ಪುರಂದಾರ ವಿಠ್ಠಲನಾ |
ಪಟ್ಟದರಸಿಯು ನಮ್ಮ ಇಷ್ಟಾರ್ಥ ಕೊಡಲಿಕ್ಕೆ||೪||
0 ಕಾಮೆಂಟ್‌ಗಳು