|| ಶಿವನ ಆರತಿ ಹಾಡು ||
ಮಂಗಳ ಎನ್ನಿರೇ |ಉಮಾ ಮನೋಹರಗೆ |
ದಿವ್ಯಾಂಗನೆಯರು ಬಂದು ಬೇಗನೆ |
ಚಂದದಾರುತಿ| ತಂದು ಬೆಳಗಿರೆ |
ಇಂದಧರ ಸುತ |ಮಂದಜಾಸನಗೆ |
ಮೋದಬಡತಲಿ |ಮೋದಪುರ ನಿವಾಸ ।
ಜನರಭಿಲಾಶೆ|ಸಲಿಸುವ॥
ಚಾರು ನವಕುಶ। ತೀರ ನದದೀಧರ ।
ಧೀರ ಸುಗುಣ ಸು ಶಾಸ್ತ್ರ ಪೇಳ್ವ ||೧||
ದೋಷದೂರ ।ವಿಶೇಷ ಮಹಿಮನು
ದಾಸ ಜನರಿಗೆ ತೋಷಗರೆ ಯುತ ಶೇಷಗಿರಿಯೊಳು
ವಾಸಮಾಡಿದ ವೀರ ಗಮನ ಸುರೇಶ ಸನ್ನುತ ಬ್ರಹ್ಮೇಶ
ತಂದೆ ವರದ ಗೋಪಾಲ ವಿಠಲನ|
ದಾಸ ನೆನಿಪಗೆ ಬಂದು ಬೇಗನೆ ||೨||
0 ಕಾಮೆಂಟ್‌ಗಳು