ಬಾರೇ ಸದಯದಿಂದ - Baare Sadayadinda

|| ಸರಸ್ವತಿ ಸ್ತುತಿ ||




ಬಾರೇ ಸದಯದಿಂದ ಕೂರೇ ವದನದಲ್ಲಿ 

ಹೇ ಮಾತೆ ಬ್ರಹ್ಮನರಸಿl

ತೋರೇ ಕೃಪೆಯನಂಬೆ ತಾರೇ ವರವನೆಂಬೆ 

ನಾ ಬಂದೆ ನಿನ್ನನರಸಿll


ನೀಡೇ ಸುಮತಿಗತಿಯ ಆಡೇ ಮನೋಂಗಣದಿ 

ವಾಗ್ದೇವಿ ಬಳಿಗೆ ಬಂದುl

ಊಡೇ ಕರುಣಸುಧೆಯ ಮಾಡೇ ಅನುಗ್ರಹವ 

ಕಲ್ಯಾಣಿ ಮುದವ ತಂದುll


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು