|| ಶ್ರೀರಾಮ ಸ್ತುತಿ ||
ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮ||ಪ||
ಜನ್ಮ ಜನ್ಮಾಂತರದ ದುಷ್ಕರ್ಮ ಹೋಗದೆ ||ಅ.ಪ||
ಕಂತುಪಿತನ ದಿವ್ಯ ನಾಮ ಅಂತರಂಗದೊಳಿಟ್ಟು
ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾಗಿ
ಭಕ್ತಿರಸದಲಿ ತನ್ನ ಚಿತ್ತ ಪರವಶವಾಗಿ
ಅಚ್ಯುತನ ನಾಮವ ಬಚ್ಚಿಟ್ಟುಕೊಳ್ಳದೆ||೧||
ಕಂತುಪಿತನ ದಿವ್ಯನಾಮ ಅಂತರಂಗದೊಳಿಟ್ಟು
ಚಿಂತೆಯೆಲ್ಲ ಬಿಟ್ಟು ನಿಶ್ಚಿಂತನಾಗಿ ||
ಕಣ್ಣೊಳಗಿದ್ದ ಮೂರುತಿಯ ತನ್ನೊಳಗೆ ತಂದು
ಘನ್ನಪೂರ್ಣ ಪುರಂದರವಿಠಲನ ಭಜಿಸದೆ ||೨||
0 ಕಾಮೆಂಟ್‌ಗಳು