ನೀಲಲೋಹಿತ ಡಮರುಗ - Neela Lohitha Damaruga

|| ಶಿವ ಸ್ತುತಿ ||



ನೀಲಲೋಹಿತ ಡಮರುಗ ತ್ರಿಶೂಲ ಶೋಭಿತ||ಪ||

ಫಾಲನಯನ ಶುಂಡಾಲ ಚರ್ಮ ಸುದು

ಕೂಲ ಮೃಡ ಸತತ ಪಾಲಿಸು ಕರುಣದಿ ||ಅ.ಪ||


ನಂದಿವಾಹನ ನಮಿಪೆ ಖಳವೃಂದ ಮೋಹನ

ಅಂಧಕರಿಪು ಶಿಖಿ ಸ್ಯಂದನ ಜನಕ ಭೂಷಣ

ಸನಂದನಾದಿ ಮುನಿ ವಂದಿತ ಪದಯುಗ ||೧||


ಸೋಮಶೇಖರ ಗಿರಿಜಾಸು ತಾಮ್ರ ಲೇಖರಾ

ಸ್ತೋಮವಿನುತ ಭವ ಭೀಮ ಭಯಾಂತಕ

ಕಾಮರಹಿತ ಗುಣಧಾಮ ದಯಾನಿಧೆ ||೩||


ನಾಗಭೂಷಣ ವಿಮಲ ಸುರಾಗ ಭಾಷಣ

ಭೋಗಿಶಯನ ಜಗನ್ನಾಥ ವಿಠಲನ

ಯೋಗದಿ ಒಲಿಸುವ ಭಾಗವತರೊಳಿಡೊ ||೩||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು