|| ಶ್ರೀಹರಿ ಸ್ತುತಿ ||
ಯಾಕೆ ನಿರ್ದಯನಾದೆಯೊ ಶ್ರೀ ಹರಿಯೇ
ಯಾಕೆ ನಿರ್ದಯನಾದೆಯೊ||ಯಾಕೆ||
ಶ್ರೀಕಾಂತ ಎನ ಮೇಲೆ
ಎಳ್ಳಷ್ಟು ದಯವಿಲ್ಲ||ಶ್ರೀಕಾಂತ||
||ಯಾಕೆ ||
ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಬಿಂಕದಿ ಪ್ರಹ್ಲಾದನ ಅಪ್ಪಿಕೊಂಡೆ||ಕಂಗೆಟ್ಟು||
ಮಂಗಳಪದವಿತ್ತು ಮನ್ನಿಸಿದೆ ಅವನಿಗೆ||2||
ಬಂಗಾರವೆಷ್ಟು ಕೊಟ್ಟನು ಹೇಳೊ ಹರಿಯೇ....
||ಯಾಕೆ ||
ಸಿರಿದೇವಿಗೆ ಹೇಳದೆ ಸೆರಗು ಸಂಹರಿಸಿದೆ
ಗರುಡನ ಮೇಲೆ ಗಮನವಾಗಿದೆ||ಸಿರಿದೇವಿಗೆ||
ದಯದಿಂದ ನೀ ಬಂದು ಕರಿಯನುಧ್ಧರಿಸಿದೆ||2||
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೇ...
||ಯಾಕೆ ||
ಅಜಮಿಲನು ಅಣ್ಣನೆ , ವಿಭೀಷಣನು ತಮ್ಮನೆ
ನಿಜದಿ ರುಕ್ಮಾಂಗಧನು ನಿನ್ನ ಮೊಮ್ಮಗನೆ
||ಅಜಮಿಲನು||
ಭಜನೆಗವರೆ ಹಿತರೆ ನಾ ನಿನಗೆ ಅನ್ಯನೆ||2||
ತ್ರಿಜಗಪತಿ ಸಲಹೆನ್ನ ಪುರಂದರವಿಠ್ಠಲ
||ಯಾಕೆ ||
0 ಕಾಮೆಂಟ್‌ಗಳು