|| ಗೌರಿ ಸ್ತುತಿ ||
ಮಾತಾಡೆ ಎನ್ನ ಮೌನದ ಗೌರಿ
ಯಾತಕಚಲಮನ ಸೋತವನೊಡನೆ ||
ಮಾತಾಡೇ ಗೌರಿ ಮಾತಾಡೇ || ಪ ||
ನಸು ನಗೆ ಮೊಗವಿದು ಬಾಡಿದ ಕೆಂದುಟಿಯು
ಬೆಸೆದಿರಲು ನಾ ನೋಡಿ |
ವಸುಧೆಯೊಳಗೆ ನಾ ಜೀವಿಸಲಾರೆ |
ಘಸಘಸವ್ಯಾತಕೆ ತುಂಬಿತು ಅರಗಿಣಿ ||೧||
ಕ್ಷಣಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೇ ನೀ ಬಾರೇ |
ಎನ್ನಪರಾಧವ ಮನ್ನಿಸಿ ಬಾರೇ
ನಿನ್ನಯ ಬಿಟ್ಟರೆ ಗತಿ ಇನ್ಯಾರೇ ||೨||
ಕ್ರೋಧವ್ಯಾತಕೆ ಎನ್ನೊಳು ಗೌರಿ ಎನ್ನಪ-
ರಾಧವು ಇದ್ದರು ತಾಳೇ
ಶ್ರೀದವಿಠಲನ ಪಾದ ಕಿಂಕಿಣಿಯೇ
ಆದರಿಸುವೆ ನಾ ಆದರಿಸುವೆನೆ ||೩||
0 ಕಾಮೆಂಟ್‌ಗಳು