|| ಶ್ರೀಕೃಷ್ಣ ಸ್ತುತಿ ||
ರಚನೆ : ಶ್ರೀ ಇಂದಿರ ದಾಸರು
ಗೋಪಿ ಬಾಲನೆ ಬಹುಗುಣ ಶೀಲನೆ
ಗೋವಳ ಪಾಲನೆ ನೋಡುವೆ ಬಾ ಬಾ ಬಾ ||ಪ||
ಗೋಪ ರೂಪನೆ ಪಾಪ ದೂರನೆ
ನೀಪದೊಳು ಕುಳಿತು ಗೋಪೇರ ವಸ್ತ್ರವ
ಶ್ರೀಪತಿ ನೀಡಿದಿ ಬಾ ಬಾ ಬಾ ||೧||
ಸಿಂಧು ಮಂದಿರ ಸುಂದರಾಂಬರ
ಮಂದಹಾಸವ ಮಾಡಿ ವಂದಾರುಗಳ ಮಾಡಿ
ಆನಂದದಿ ನೋಡುವೆ ಬಾ ಬಾ ಬಾ ||೨||
ದೋಷದೂರನೆ ವಾಸುದೇವನೆ
ಶೇಷಗಿರಿಯಲಿ ನಿಂತು ದಾಸ ಜನರಿಗೆಲ್ಲ
ಇಂದಿರೇಶನೆ ಕಾಯುವಿ ಬಾ ಬಾ ಬಾ ||೩||
0 ಕಾಮೆಂಟ್‌ಗಳು