ತಾನೆನ್ನಬಹುದೇ ಈ ದೇಹವ - Thanennabahude Ee Dehava

|| ತತ್ವ ಪದ ||

ರಚನೆ : ಮೈಸೂರು ಶಿವರಾಮ ಶಾಸ್ತ್ರಿಗಳು 




ತಾನೆನ್ನಬಹುದೇ ಈ ದೇಹವ। ತಾನೆನ್ನಬಹುದೇ। 

ಜ್ಞಾನ ಮೂರುತಿ ತಾನು। ಕಾಣುತೆಲ್ಲವ ನಿಲ್ಲಿ |

ಪ್ರಾಣ ಹಾರಿದ ಮೇಲೆ ಹೂಳುವೊ ಹಣವಿದ ॥ಪ॥ 


ನಿತ್ಯನಲ್ಲೆಂದೆಸುಪ್ತಿಯೊಳಿದ್ದ| ಸತ್ವವ ಕೊಂದೆ। 

ಮೃತಿಕೆಯನು ತಂದೆ। ಭೃತ್ಯನಾನದಕೆಂದೆ। 

ಸತ್ತು ಹುಟ್ಟುತ ಬಂದೆ ಪೃಥ್ವಿಯೊಳಗೆ ಬೆಂದೆ ||೧||


ಯಾರು ನೀ ಪೇಳೈ|ದೇಹವ ಬಿಟ್ಟು ಬ್ಯಾರೇ ನೀನೇಳೈ|

ತೋರುವಿ ತನುವಿಗೆ ಬೇರೆ ನೀನಾದೊಡೆ। 

ಹಾರಿತಿ ಜಗವೆಲ್ಲ ತೋರದಿನ್ನೇನಿಲ್ಲಡ ||೨||


ಪೊರೆಯೊ ಶ್ರೀ ಹರಿಯೇ। ಎಂಬುವದೊಂದೆ |

ಹರಿಯ ನೀನರಿಯೇ। 

ಹರಿ ಇರುವಂದವನರಿಯಲು ನೀ ನಮ್ಮ | 

ಗುರು ಗುರುಶಂಕರಾರ್ಕನೋಳ್‌ ಬೆರೆಯೋ ನರಕುರಿಯೇ॥೩|| 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು