ವೈಕುಂಠ ನಾರಾಯಣ ವಿಠ್ಠಲಾ - Vaikunta Narayana Vithala

|| ನಾರಾಯಣ ಸ್ತುತಿ ||




ವೈಕುಂಠ ನಾರಾಯಣ ವಿಠ್ಠಲಾ| 

ಭೂಮಿಯ ವೈಕುಂಠವಾಗಿಸೆ ಶ್ರೀಹರಿ|

ಪ್ರೇಮದಿಂದಲಿ ಬಂದ ಭಕ್ತಿಗೆ ಒಲಿದು ||


ವಕ್ಷಸ್ಥಳದಲ್ಲಿ ಲಕ್ಷ್ಮಿಯ ಧರಿಸಿ 

ಲಕ್ಷ್ಮಣಾಗ್ರಜ ಬಂದ ಲಕ್ಷಣದಿಂದ| 

ಕುಕ್ಷಿಯೊಳೀರೇಳು ಲೋಕ ಧರಿಸಿ ಎಮ್ಮ |

ರಕ್ಷಿಸಲೋಸುಗ ಧಾವಿಸಿ ಬಂದನು ||


ನಾರದ ತುಂಬುರರೊಡಗೂಡಿ ಬಂದ 

ಮಾರುತಿಯೊಡಗೂಡಿ ಸಂಭ್ರಮದಿಂದ |

ಮೂರುತಿ ರೂಪದಿ ವಿಶ್ವ ವಿಠ್ಠಲಹರಿ|

ಕೀರುತಿ ಮೆರೆಯಲು ಓಡೋಡಿ ಬಂದ||


ದಾಸವರದ ಬಂದ ವಾಸುದೇವನು ಬಂದ 

ಶೇಷಾಚಲ ವಾಸ ವೆಂಕಟರಮಣ |

ದಾಸಾಶ್ರಮವಾಸಿ ದಾಸಕೇಶವನುತ| 

ದಾಸರ ಸಲಹಳು ಬಂದಾ ಮುಕುಂದಾ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು