|| ಮುಕುಂದ ಸ್ತುತಿ ||
ದೇವಕಿ ಕಂದ ಬಾಲ ಮುಕುಂದ
ನಿಗಮೋದ್ಧಾರ ನವನೀತ ಚೋರ||
ಖಗಪತಿ ವಾಹನ ಜಗದೋದ್ಧಾರ
ವಾರಿಧಿಶಯನ ಕಾರುಣ್ಯಧಾಮ||
ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ||
ಮಕರಕುಂಡಲಧರ ಮೋಹನವೇಷ
ರುಕ್ಮಿಣಿ ವಲ್ಲಭ ಪಾಂಡವ ಪೋಷ||
ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ||
ವರ ವೇಲಾಪುರ ಚೆನ್ನ ಪ್ರಸನ್ನ
ಪುರಂದರವಿಠಲ ಸಕಲಗುಣಪೂರ್ಣ||
0 ಕಾಮೆಂಟ್‌ಗಳು