ಖಗ ಗಮನ ಜಗದ ಜೀವ - khgaga Gamana Jagada Jeeva

|| ಶ್ರೀರಾಮ ಸ್ತುತಿ ||




ಖಗ ಗಮನ ಜಗದ ಜೀವ ರಘುವಂಶೋದ್ಧಾರಣ

ನಗಧರನೆ ನಿಗಮಗೋಚರ 

ನಾಗಶಯನ ಮುರಮರ್ದನ ||ಪ||


ವನಜಸಂಭವವಿನುತ ಮನುಮುನಿವಂದಿತ

ಜನಕಜೆಯ ಪ್ರಾಣಪ್ರಿಯ ವನಮಾಲನೆ ಭವಮೋಚನ 

ಜಯವಾಮನ ಸುಖಧಾಮನೆ ಇನಕೋಟಿಪ್ರಭಾಮಯ 

ವನಜಾಕ್ಷನೆ ||೧||


ಸತಿಯ ಪಾಷಾಣಸ್ಥಿತಿ ವಿಮೋಚನ ಪತಿತಪಾವನ

ಸತ್ಯಭಾಮೆರಮೆಯ ನಾಥ ನುತ ಕಿಂಕರ

ಹಿತಮಂದಿರ ಜಿತದಶಶಿರ ಹತಮುಪ್ಪುರನತಿಹಿತ 

ರತಿ ಪತಿಪಿತ ಕ್ಷಿತಿಧವ ||೨||


ದಾಮೋದರ ಶ್ರೀರಾಮ ಭಕುತಪ್ರೇಮ ನಿಸ್ಸೀಮ

ಸ್ವಾಮಿ ನೀಲಮೇಘಶ್ಯಾಮ ಭೂಮಿಜ ವರಸ್ಮರಣೀಕರ

ಕಾಮಿತ ವರವೀಯುವ 

ಸ್ಥಿರವಿಮಲಚರಿತ ಕರುಣಾಕರ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು