|| ಶ್ರೀ ರಾಮ ಭಜನೆ ||
ರಚನೆ : ಪುರಂದರದಾಸರು
ರಾಮ ನಾಮವ ನುಡೀ ನುಡೀ
ಕಾಮ ಕ್ರೋಧಗಳ ಬಿಡೀ ಬಿಡೀ || ಪ ||
ಗುರುಗಳ ಚರಣವ ಪಿಡೀ ಪಿಡೀ
ಹರಿ ನಿರ್ಮಾಲ್ಯವ ಮುಡೀ ಮುಡೀ
ಕರೆ ಕರೆ ಭವಪಾಶವ ಕಡೀ ಕಡೀ I ಬಂದ
ದುರಿತವನೆಲ್ಲ ಹೊಡೀ ಹೊಡೀ || ೧ ||
ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನ ಸಾರಥಿ ರೂಪ ನೋಡೋ ನೋಡೋ | ಹರಿ
ಭಜನೆಯಲಿ ಮನ ಇಡೋ ಇಡೋ || ೨ ||
ಕರಿರಾಜ ವರದನ ಸಾರೋ ಸಾರೋ | ಶ್ರಮ
ಪರಿಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ | ನಮ್ಮ
ಪುರಂದರ ವಿಠಲನ ಸೇರೋ ಸೇರೋ || ೩ ||
0 ಕಾಮೆಂಟ್‌ಗಳು