||ವೆಂಕಟಾಚಲ ಅವಧೂತರ ಸ್ತುತಿ||
ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ
ಗುರುನಾಥನ ಮರೆತು, ಬಂದು ಹಂಗೆ ಹೋಗಿಬಿಟ್ಯಲ್ಲೋ
ಅವಧೂತನ ಬಂದು ಹಂಗೆ ಹೋಗಿಬಿಟ್ಯಲ್ಲೋ || ಪ ||
ಹಿಂದೆ ಉಳಿದ ವಾಸನಾದಿ, ಕರ್ಮವನ್ನು ಕಳೆಯೆ ನೀನು
ಸತ್ತು ಹುಟ್ಟಿ ಭವಕೆ ಬಂದೆ...
ಗುರುವ ಮರೆತು ಭವದಿ ನೊಂದೆ || 1 ||
ಗುರುವ ನೀನು ನಂಬಲಿಲ್ಲ ಅವನ ವಾಕ್ಯ ನಡೆಸಲಿಲ್ಲ
ನಾನು ಎಂಬ ಹಮ್ಮು ಬಿಡದೇ...
ಬ್ರಾಂತಿ ಹೊಂದಿ ಅಳಿದೆಯಲ್ಲೋ || 2 ||
ಬರಿಯ ಮೈಯ ತೊಳೆದರೇನೊ, ಸೂಕ್ಷ್ಮ ತನುವ ತೊಳೆದೆಯೇನೋ
ಶಂಕೆಯನ್ನು ಮನದಿ ಹೊಂದಿ...
ಕೊಚ್ಚೆಯಲ್ಲಿ ಬಿದ್ದೆಯಲ್ಲೋ || 3 ||
ತತ್ವವನ್ನು ತಿಳಿಯಲಿಲ್ಲ, ಭಕ್ತಿಯಿಂದ ಭಜಿಸಲಿಲ್ಲ
ಸ್ವಾರ್ಥಕಾಗಿ ದುಡಿದು ದುಡಿದೂ...
ದೇಹ ಕುಗ್ಗಿ ಹೋಯಿತಲ್ಲೋ || 4 ||
ಆತ್ಮನೆಂದು ಅಳಿವುದಿಲ್ಲ ದೇಹವೆಂದು ಉಳಿವುದಿಲ್ಲ
ದೇಹ ಮಣ್ಣು ಸೇರೋ ಒಳಗೆ...
ಗುರುವ ಸೇರಿ ಮುಕ್ತಿ ಪಡೆಯೋ || 5 ||
ದೇವ ತಾನೆ ಧರೆಗೆ ಬಂದು ಗುರುವಿನಿಂದ ಜ್ಞಾನ ಪಡೆದು
ಗುರುವಿನಣತಿಯಂತೇ ನಡೆದು...
ಧರ್ಮವನ್ನು ರಕ್ಷಿಸುವನೋ || 6 ||
0 ಕಾಮೆಂಟ್‌ಗಳು