|| ಬಿಂದು ಪಂಚಕ ||
ರಚನೆ : ಶ್ರೀ ಶ್ರೀ ವಿಜಯಮಾರುತಿ ಗುರುಗಳು
ಬೆಲಗೂರು
ಬಿಂದುಮಾಧವ ಬಿಂದುಮಾಧವ
ಬಿಂದುಮಾಧವ ಪಾಹಿ ಮಾಮ್ ।
ಬಿಂದುಮಾಧವ ಬಿಂದುಮಾಧವ
ಬಿಂದುಮಾಧವ ರಕ್ಷ ಮಾಮ್ ॥ ಪ ॥
ಬೆಲಗೂರಿನಲಿ ವಾಸಿಸುವವನೇ ।
ಜಗಮಂಗಳವ ಮಾಡುವನೇ ।
ಲಕ್ಷ್ಮೀದೇವಿ ವರತನುಜಾತನೇ ।
ಲೀಲಾ ಮಾನುಷಾಕಾರನೇ ॥। ೧ ॥
ಪ್ರೇಮರೂಪನೇ ದೇವನೇ ।
ಗುಣಸಾಗರನೇ ವಿಮಲನೇ ।
ಬ್ರಹ್ಮತೇಜ ಪ್ರಕಾಶನೇ ।
ಸತ್ಯಮಾರ್ಗದ ದೀಪನೇ ॥ ೨ ॥
ಬಿಂದುಮಾಧವ ಎನ್ನಯಾ ।
ಸೇವೆಯಾ ಪಡೆಯೋ ತನ್ಮಯಾ ।
ಮನ್ನಿಸೆನ್ನನು ತೋರಿ ಕೃಪೆಯಾ ।
ಅಡಿಯಲಿರಿಸೋ ನಿನ್ನಯಾ ॥ ೩॥
ರಾಮನಾಮವ ಹಾಡುತಾ |
ಸೂಕ್ಮ ತತ್ವವ ಹೇಳುತಾ ।
ವಾನರೋತ್ತಮ ಶೂರನಾ |
ಸೇವೆಯ ನಿರತ ಮಾಡುತಾ ॥ ೪ ॥
ಬಾರೋ ಒಲಿದು ಘನನೇ ಮುದದಿ ।
ಪಾರುಮಾಡೋ ಭವಬಂಧನದಿ ।
ನನಗೆ 'ವಿಜಯವೇ-ಬಿಂದು' ಸನಿಹದಿ
ಪುನೀತನಾಗುವೆ ಈ ಜಗದಿ ॥ ೫ ॥

0 ಕಾಮೆಂಟ್‌ಗಳು