|| ಗುರು ಭಜನೆ ||
ಗುರು ದರುಶನ ಜನ್ಮ ಪಾವನ
ಗುರು ಗಾಯನ ಮುಕ್ತಿ ಸಾಧನ
ಗುರುವಿನ ಸೇವೆಯೆ ಗಂಗಾ ಸ್ನಾನ
ಗುರುವಿನ ಮಂತ್ರ ಅಮೃತ ಪಾನ
ಗುರುವಿನ ಪ್ರೇಮ ಸ್ವರ್ಗಕ್ಕೆ ಸೋಪಾನ
ಗುರು ಕೃಪೆಯೆ ಸರ್ವ ಶಕ್ತಿಗೆ ಸಾಧನ ||೧||
ಗುರುವಿಲ್ಲದ ಬಾಳು ಬರಿ ಬರಡಿದ್ದಂತೆ
ಗುರುದೊರೆಯದೂಡೆ ಕತ್ತಲೆ ಕವಿದಂತೆ
ಗುರುಬಯಸದ ಜನ್ಮ ಕಾರ್ಕೋಟ ವಿಷದಂತೆ
ಗುರುಧ್ಯಾನ ಮಾಡದವ ಇದ್ದರು ಇರದಂತೆ ||೨||

0 ಕಾಮೆಂಟ್‌ಗಳು