|| ಲಕ್ಷ್ಮಿ ಸ್ತುತಿ ||
ತೋರೆ ನೀ ಲಕುಮಿ ಸುಂದರ ಮೊಗವ |
ಝಣ ಝಣ ಕಾಂಚಾಣ ಬೀರುವ ಕರವ |
ನವರತ್ನ ಹಾರವು ವಜ್ರ ಕಿರೀಟವು |
ಮುದ್ದು ಮುಖದೊಳು ಮೂಗುತಿ ಹೊಳೆಯಲು |
ಅಂಬುಜ ನಯನೆಯ ಕರದಿ ಕಮಲವು |
ಅಂದುಗೆ ಕಿರುಗರಜ್ಜೆ ನಾದವ ಬೀರುವ |
ಸರ್ವಾಭರಣದಿ ಶೋಭಿಪ ತೇಜವ |
ಬಣ್ಣಿಸಲಸದಳ ಆ ದಿವ್ಯ ರೂಪವ |
ಕೊಲ್ಲಾಪುರ ನಿಲಯೆ|ಪೂಜಿತೆ ಮಾನ್ವಿತೆ |
ಆದಿ ಲಕ್ಷ್ಮೀಯೆ ನೀ ಧನಲಕ್ಷ್ಮೀಯೇ |
ಬಾರೆ ನೀ ಬಾರೆ|ಧಾನ್ಯ ಲಕ್ಷ್ಮೀಯೆ ಬಾರೆ
ಬಾರೆ ನೀ ಬಾರೆ|ಗಜ ಲಕ್ಷ್ಮೀಯೆ ಬಾರೆ
ಬಾರೆ ನೀ ಬಾರೆ|ಭಾಗ್ಯ ಲಕ್ಷ್ಮೀಯೆ ಬಾರೆ
ಬಾರೆ ನೀ ಬಾರೆ|ಧೈರ್ಯ ಲಕ್ಷ್ಮೀಯೆ ಬಾರೆ
ಬಾರೆ ನೀ ಬಾರೆ|ವಿದ್ಯಾ ಲಕ್ಷ್ಮೀಯೆ ಬಾರೆI
ವಿಜಯ ಲಕ್ಷ್ಮೀಯೆ ಬಾರೆI ನೀ ಬಾರೆ|ನೀ ಬಾರೆ |
ತೋರೆ ನೀ ಲಕುಮಿ ಸುಂದರ ಮೊಗವ ||
0 ಕಾಮೆಂಟ್‌ಗಳು