ಕಂಬದಿಂದ ಹುಟ್ಟಿ ಬಂದ ನಾರಸಿಂಹ ರೂಪಿಯೆ - Kambadinda Huṭṭi Banda Narasimha Rūpiye


|| ನರಸಿಂಹ ಸ್ತುತಿ ||




ಕಂಬದಿಂದ ಹುಟ್ಟಿ ಬಂದ ನಾರಸಿಂಹ ರೂಪಿಯೆ|

ನಂಬಿ ಬಂದ ಕಂದನನ್ನು ಸಲಹಿದಂತ ಸ್ವಾಮಿಯೆ|| 


ಗಟ್ಟಿ ಮೊಸರ ಕದ್ದು ತಿಂದ ವೇಣುಗಾನ ಲೋಲನೆ |

ಬೆಟ್ಟವನ್ನು ಬೆರಳಲೆತ್ತಿದಂತ ಪುಟ್ಟ ಪೋರನೆ|| 


ಜನನಿಗಂದು ಬಾಯ ತೆರೆದು ತ್ರಿಜಗವನ್ನು ತೋರಿದೆ|

ಜನಕ ಪುತ್ರಿ ಸೀತೆಯನ್ನು ಧನುವ ಮುರಿದು ವರಿಸಿದೆ||


ಬಿಲ್ಲ ಹಬ್ಬಕ್ಕೆಂದು ಬಂದು ಖುಲ್ಲರನ್ನು ಮಡುಹಿದೆ|

ಮಲ್ಲ ಕಂಸನನ್ನು ಕೊಂದು ಮಾತೆ ಪಿತರ ಸಲಹಿದೆ||  


ರಾಧೆ ಮನವ ಕದಿಯಲೆಂದು ಮುದದಿ ಕೊಳಲನೂದಿದೆ| 

ಮೋದದಿಂದ ಪಾರ್ಥಗಂದು ಗೀತೆಯನ್ನು ಸಾರಿದೆ||


ಲೀಲೆಯಿಂದ ದುಷ್ಟರನ್ನು ವಧಿಸಿದಂತ ದೇವನೆ|

ಹಾಲ ಮನಸಿನಿಂದ ಸಲಹೊ ನಮಿಪೆ ಬಾರೊ ಬೇಗನೆ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು