ಸಾಮಗಾನ ಕೋವಿದೆ ರಾಗರಾಣಿ ಶಾರದೆ - Samagana Kovide Raga Rani Sharade

|| ಶಾರದಾ ಸ್ತುತಿ ||



ಸಾಮಗಾನ ಕೋವಿದೆ ರಾಗರಾಣಿ ಶಾರದೆ 

ಸಾಮಗಾನ ಕೋವಿದೆ ಆ…ಆ… ||ಸಾಮಗಾನ||


ಶೃಂಗ ಪುರದಿ ನೆಲೆಸಿ ನಿಂತ ಮಂಗಳಾಂಗಿ ಭಾರತಿ ||

ತಿಂಗಳ ಬೆಳಕ ಶಿರದಿ ಧರಿಸಿದ ಅಂಗಜಾರಿಯ ಸೋದರಿ 

||ಸಾಮಗಾನ||


ತುಂಗಾನದಿ ಬಳಸಿ ನಿಂತ ಮಾತಂಗಿ ಸುಂದರಿ ||

ಮಂದಹಾಸ ಶೋಭಿತೆ ಇಂದ್ರ ಪೂಜಿತ ವಂದಿತೆ ||  

||ಸಾಮಗಾನ||


ಅಕ್ಷಮಾಲೆ ಅಮೃತ ಕಳಸ ಹಸ್ತ ಪುಸ್ತಕರೂಪಿಣಿ ||

ಸಾಕ್ಷಾತ್ಕಾರದಿ ಶಂಕರಗೊಲಿದ ಅಕ್ಷರರೂಪಧಾರಿಣಿ| |

||ಸಾಮಗಾನ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು