|| ಗೋವಿಂದ ಸ್ತುತಿ ||
ಹೆತ್ತ ತಾಯಿ ತಂದೆಯವರ ಬಂಧವನ್ನು ಬಿಡಿಸಿದೆ|
ಗತ್ತಿನಿಂದ ಮೆರೆಯುತ್ತಿದ್ದ ಕಂಸನನ್ನು ಮಥಿಸಿದೆ||
ನಿನಗೆ ಮೃತ್ಯುವಾಗಿ ಬಂದ ಪೂತನಿಯನು ವಧಿಸಿದೆ|
ಧನುಜ ಕುಲವ ನಾಶ ಮಾಡಿ ಲೋಕವನ್ನು ಬೆಳಗಿದೆ||
ದೇವ ನಿನ್ನ ಕಾಣಲೆಂದು ಹರನು ಬಂದ ಬಿಕ್ಷೆಗೆ|
ಹೂವಿನಂತ ಮೊಗವ ಕಂಡು ನಕ್ಕ ಶಿವನು ಮೆತ್ತಗೆ||
ಮನುಜ ಕುಲವ ಬೆಳಗಲಿಕ್ಕೆ ಗೀತೆಯನ್ನು ಸಾರಿದೆ|
ದಿನವು ಬಿಡದೆ ಪೂಜೆಗೈವೆ ಮನದಿ ನಾನು ನಮಿಸಿದೆ||
ಚರಣ ಪಿಡಿದು ಬೇಡಿಕೊಂಡು ಕೃಷ್ಣ ನಿನ್ನ ನುತಿಸುವೆ|
ಶರಣು ಬಂದ ಜನರಿಗೆಲ್ಲ ಹರಸು ಎಂದು ಬೇಡುವೆ||

0 ಕಾಮೆಂಟ್‌ಗಳು