|| ಹರಿ ಸ್ತುತಿ ||
ಬದುಕೆಂಬ ರಥದಲ್ಲಿ ಹರಿನಾಮ ಬಲುಮುಖ್ಯ
ಇದನರಿತು ಬಾಳಯ್ಯ ಹೇ ಮಾನವ||ಪ||
ಇರಬೇಕು ನಾವಿಲ್ಲಿ ಜಗದ ಚಿಂತೆಯ ತೊರೆದು
ಪರರ ಬೇಡದೆ ಜೀವನವ ನಡೆಸಬೇಕು|
ಇರುವ ತನಕವು ದಾನ ಸತ್ಕರ್ಮ ಮಾಡುತ್ತ
ಕರುಣಾಳು ಕೃಷ್ಣನನು ನುತಿಸುತಿರಬೇಕು||
ಕಲಿಯುತ್ತ ವಿದ್ಯೆಗಳ ಬಿಡುತ ಮೋಹವ ನಿರತ
ತಿಳಿದ ವಿಷಯವನರಿತು ಕಲಿಸಿ ಕೊಡಬೇಕು|
ಬೆಳೆಸುತ್ತ ಭಕ್ತಿಯನು ಹೊಸಕನಸ ಕಾಣುತ್ತ
ನಳಿನನಾಭನ ಪೂಜೆ ದಿನ ಮಾಡಬೇಕು||
ತರಿಯುತರಿಷಡ್ವರ್ಗಗಳ ಮುಗ್ದ ಮನ ಗೆಲುತ
ಹಿರಿಯರಿಗೆ ಗೌರವವ ನೀಡೊ ಗುಣವಿರಲಿ|
ಗುರುದಯೆಯ ಪಡೆಯುತ್ತ ಮಿತ್ರರೊಲವನುಗಳಿಸಿ
ಸಿರಿಯರಸನನು ಭಜಿಸೊ ಸುಪ್ರಶಾಂತದಲಿ||
0 ಕಾಮೆಂಟ್‌ಗಳು