ಹಹಹಹಹ ಮಾನವ ಹೀಗೇಕೆ ಕೆಟ್ಟೆ - Hahahahaha Manava Heegeke Kette

|| ಶ್ರೀ ಹರಿ ಭಜನೆ ||



ಹಹಹಹಹ ಮಾನವ ಹೀಗೇಕೆ ಕೆಟ್ಟೆ 

ಹರಿಭಜನೆಯ ಬಿಟ್ಟೆ || ಪ || 


ಜನ್ಮಾಂತರದಲಿ ಮಾಡಿದ ಪುಣ್ಯ ಇಂದಿಗೆ 

ಭೂಸುರ ಜನ್ಮವ ಕೊಟ್ಟ ದೇವವರೇಣ್ಯ | 

ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯ ಚರಿತ್ರನ | 

ಒಮ್ಮಾನರೂ ನೀ ಮನ್ನಿಸಲಿಲ್ಲ ಠೊಣ್ಯ || ೧ || 



ತನುವಿನ ಚಿಂತೆ ತನಯರ ಚಿಂತೆ ಧನಧಾನ್ಯದ ಚಿಂತೆ | 

ವನಿತೆಯರ ಚಿಂತೆ ಉದರದ ಚಿಂತೆ | 

ಅನುದಿನದಲಿ ತನುವ ನೆನೆಸುತ ಕನಕನಂತೆ || ೨ || 


ಮಡದಿ ಮಕ್ಕಳಿಗೆ ಒಡವೆಯ ಗಳಿಸ | 

ಬೇಕೆಂಬ ಚಿಂತೆ ಮನೆ ಚಿಂತೆ ಮಾನ್ಯದ ಚಿಂತೆ 

ಮನುಜರಿಗೆ ಅನುದಿನ ಪುರಂದರ ವಿಠಲನ ನೆನೆಯದೆ ಕನಕನಂತೆ || ೩ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು