|| ಹನುಮ ಸ್ತುತಿ ||
ಹನುಮಂತ ಧೀಮಂತ
ಪವನಾತ್ಮಜ ಶ್ರೀ ರಾಮದೂತ
ಅಂಜನ ಸುತನೆ ಅಮರಾತ್ಮ
ಜೀವೋತ್ತಮನೆ ಮರುತಾತ್ಮ
ಜಾನಕಿಗುಂಗುರ ನೀನಿತ್ತೆ
ರಾಮಗೆ ಮಣಿಯನು ತಂದಿತ್ತೆ ||೧||
ಸಂಜೀವಿನಿಯ ನೀ ತಂದೆ
ಸಕಲರ ಪೊರೆಯಲು ನೀ ಬಂದೆ
ಮೂರ್ಜಗದಲ್ಲೂ ನಿನ್ನ ನಾಮ
ಮುನಿಜನ ಪ್ರೇಮ ಪವಮಾನ ||೨||
ಜಯ ಘನ ಮಹಿಮ ಬಲವಂತ
ಜಯರಾಮ ವಿಠಲನ ನಿಜ ಬಂಟ
ಜಯ ಘನ ಮಹಿಮ ಬಲವಂತ
ಜಯರಾಮ ವಿಠಲನ ನಿಜ ಬಂಟ ||೩||

0 ಕಾಮೆಂಟ್‌ಗಳು