ನಮೋ ನಮೋ ಶ್ರೀ ರಾಘವೇಂದ್ರ - Namo Namo Sri Raghavendra

|| ರಾಘವೇಂದ್ರ ಸ್ತುತಿ ||




ನಮೋ ನಮೋ ಶ್ರೀ ರಾಘವೇಂದ್ರ 

ಸದ್ಗುಣಸಾಂದ್ರ. ||ನಮೋ ನಮೋ||

ಕಮಲನಾಭನದಾಸ ಕಮಲಾಪ್ತ ಭಾಸ||೨||

                              ||ನಮೋ ನಮೋ||


ದೇಶದೇಶಗಳಿಂದ ದೈನ್ಯದಿಂದಲಿ ಬಂದ||೨||

ಶೇಷ ಜನರುಗಳನ್ನ ಸಲಿಸುವನೆ ಶ್ರೇಷ್ಠಾ

ನಾ ಸೇರಿದೆನೊ ನಿನ್ನ ನಮಿತಜನರ ಪ್ರಸನ್ನ

ಭಾಸುರಚರಿತ ಭಜಿಸುವೆನು ಅನವರತಾ

                              ||ನಮೋ ನಮೋ ||


ಭೇದಾರ್ಥಜಲಜಾರ್ಕ ಭೂರಿಬಲತರತರ್ಕ||೨||

ವಾದಿಶೈಲ ಕುಲಿಶ ವರಹಸುತೆವಾಸ

ಬಾಧಿಸುವ ಅಘಜೀರ್ಣ ಮಾಡು ಗುರುವರ ಪೂರ್ಣ

ಬೊಧಮತ ಸಂಭೂತ ಭೂರಿಪ್ರಖ್ಯಾತ 

                               ||ನಮೋ ನಮೋ ||


ನತಜನಾಶ್ರಯ ಪ್ರೀಯ 

ನೆರೆನಂಬಿದೆನೊ ಮಾಯಾ ||ನತಜನ||

ಮತಕದಳಿಗಜೇ೦ದ್ರ ವಿಬುಧಾಬ್ಧಿಚಂದ್ರ

ಕ್ರತುಭುಕ್ ಜಗನ್ನಾಥ ವಿಠ್ಠಲನ ನಿಜದೂತ||೨||

ಸ್ತುತಿಸಲಾಪೆನೆ ನಿನ್ನ ಯತಿಶಿರೋರನ್ನ  

                               || ನಮೋ ನಮೋ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು