|| ಗಣಪತಿ ಭಜನೆ ||
ಶರಣೆಂಬೆ ಮದವೂರ ಗಣನಾಯಕ||೨||
ಜಯ ಶ್ರೀಕರನೆ ಗಣರಾಜ ವರದಾಯಕಾ
||ಶರಣೆಂಬೆ||
ಶಿವಪುತ್ರ ಶುಭಗಾತ್ರ ಶರಣು ಸುಮುಖ
ಪ್ರಮತೇಶ ಶುಭಕರನೆ ಫಲದಾಯಕ
||ಶಿವಪುತ್ರ||
||ಶರಣೆಂಬೆ||
ನೆನೆಯುವೆ ನಿನ್ನನು ಮನತುಂಬಾ
ಮಧೂರು ಪುರಾಲಯ ಹೇರಂಭ
||ನೆನೆಯುವೆ||
ವಿಘ್ನರಾಜನೇ ನಾದಾತ್ಮಕನೆ||೨||
ದೇವಾ ನಮಿಪೆ ಆದರಿಸು ||೨||
||ಶರಣೆಂಬೆ||
ಜ್ಞಾನ ಸಿದ್ದಿಯಾ ನೀಡಲು ಬಾ
ದೀನನ ರಕ್ಷಿಸಿ ಸಲಹಲು ಬಾ
||ಜ್ಞಾನ||
ವಿಘ್ನನಾಶವ ಮಾಡಲು ಬಾ ||೨||
ಗಣಪಾ ಕರುಣೆಯ ತೋರು ಬಾ ||೨||
||ಶರಣೆಂಬೆ||

0 ಕಾಮೆಂಟ್‌ಗಳು