ಶ್ರೀರಾಮ ಜಯರಾಮ - Srirama Jayarama

|| ಶ್ರೀರಾಮ ಸ್ತುತಿ ||





ಶ್ರೀರಾಮ ಜಯರಾಮ ಜಯ ಜಾನಕಿ ರಾಮ 

ರಘುರಾಮ ಗುಣಧಾಮ ಕೌಸಲ್ಯ ರಾಮ ||ಪ||


ನಿನ್ನ ನಾಮವ ಜಪಿಸಿ ಮನದಲ್ಲಿ 

ದುರಿತ ದೂರಾಗುವುದು ಕ್ಷಣದಲ್ಲಿ

ನಿನ್ನ ಕರುಣೆಯ ಕಿಡಿ ಇರಲು ತಮದಲ್ಲಿ

ದುಃಖವು ಸರಿಯುವುದು ಮರೆಯಲ್ಲಿ ||೧||


ನಾನು ಎಂಬುದು ದಹಿಸಿ ನಿನ್ನೊಳಗೆ ಲೀನ

ಭಾವ ಭಕ್ತಿಯ ಹರಿಸಿ ರಾಮನಲ್ಲಿ ತಲ್ಲೀನ

ಇಹಪರಗಳೆಲ್ಲವೂ ಕೋದಂಡನ ಆಧೀನ 

ಈ ಜಗವೇ ಶೂನ್ಯ ರಾಮ ನಿನ್ನ ವಿಹೀನ ||೨||


ಹನುಮನ ಹೃದಯದಿ ಬಂದಿಯಾದವನು 

ಶಬರಿಯ ಭಕುತಿಗೆ ಸೋತು ಬಂದವನು

ಸುಜನರ ಪಾಲಿಸುವ ಪರಮಾತ್ಮನು

ಧರ್ಮವ ರಕ್ಷಿಸಿದ ಪುರುಷೋತ್ತಮನು ||೩||


ನೋಡಬೇಕಿದೆ ರಾಮ ನಿನ್ನ ಸಹನೆಯ ರೀತಿ

ಕಾಡಿ ಪಡಿಯುವೆ ರಾಮ ನೀನೆ ಸತ್ಯದ ಮೂರ್ತಿ

ದೂರವಾಗಿಸುವ ರಾಮ ದರ್ಪದ ಅನುಭೂತಿ

ಪಾಮರಗೆ ಕಲಿಸಿಕೊಡು ನಿನ್ನ ಸದ್ಗುಣ ನೀತಿ ||೪||


ಧೀರ ಗುಣ ಗಂಭೀರ ಸುಂದರರಾಮ

ಶಕ್ತಿ ಮುಕ್ತಿಯೋಳಿರುವ ರಾಜೇಂದ್ರ ರಾಮ

ಜಿತ ನೀನು ಪಿತ ನೀನು ಅನಂತ ರಾಮ

ಕಣಕಣದಿ ಇರುವೆ ಅನುಸೂಯಕ ರಾಮ ||೫||







 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು