ಗುರುವೆ ನಾನು ಒಂದು ಸೊನ್ನೆ - Guruve Nanu Ondu Sonne

|| ಗುರು ಸ್ತುತಿ ||



ಗುರುವೆ ನಾನು ಒಂದು ಸೊನ್ನೆ

ಸೊನ್ನೆಗೆಲ್ಲಿ ಬೆಲೆಯಿದೆ

ಸೊನ್ನೆ ಹಿಂದೆ ಇದ್ದರಂಕಿ 

ಸೊನ್ನೆಗಾಗ ಬೆಲೆಯಿದೆ


ಗುರುವೆ ನೀವು ನನ್ನ ಹಿಂದೆ

ಅಂಕಿಯಾಗಿ ಬನ್ನಿರಿ

ಸೊನ್ನೆಯಾದ ನನ್ನ ಬಾಳ್ಗೆ 

ಬೆಳಕ ತಂದು ತುಂಬಿರಿ


ನಿಮ್ಮನಳಿದ ನನ್ನ ಬದುಕು 

ನಿಮ್ಮಾಣೆಗೂ ಶೂನ್ಯವು

ಅಲ್ಪಬುದ್ಧಿ ಅತಿಆಸೆ

ಅಹಂಕಾರ ಭರಿತವು


ಅಂಕಿಯಿದ್ದರೇನೆ ತಾನೆ 

ಬೆಲೆ ಇಹುದು ಸೊನ್ನೆಗೆ

ಹಿಂದೆ ಗುರುವು ಇದ್ದರೇನೆ

ಬೆಲೆಯು ನನ್ನ ಇರುವಿಗೆ




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು