ಕಾಳಿ ರುದ್ರನ ರಮಣಿ ರಾಜರಾಜೇಶ್ವರಿ - Kali Rudrana Ramani Raja Rajeshwari

 || ದೇವಿ ಸ್ತುತಿ ||




ಕಾಳಿ ರುದ್ರನ ರಮಣಿ ರಾಜರಾಜೇಶ್ವರಿ

 ಬಾಳ ಬೆಳಗಿಸು ತಾಯಿ ಕಾಳರಾತ್ರಿ

 ಕೇಳು ಕೃಷ್ಣ ವರ್ಣೆ ಅಸುರ ಮದ ಮರ್ದಿನಿಯೆ

 ಒಳಗಣ್ಣ ತೆರೆಸಮ್ಮ ಫಾಲ ನೇತ್ರೆ ||ಪ||


 ರಕ್ತ ಬೀಜಾಸುರನ ಅಟ್ಟಹಾಸವ ಮೆಟ್ಟಿ

 ಮುಕ್ತಿ ನೀಡಿದೆ ಮಾತೆ ಮಾಹೇಶ್ವರಿ

 ಭಕ್ತ ಜನ ಪೋಷಿತೆ ಶಕ್ತಿ ದಾಯಿನಿ ಶಮಿತೆ

 ಸೂಕ್ತ ಮಾರ್ಗದಿ ನೆಡೆಸೆ ಸರ್ವೇಶ್ವರಿ ||೧||


 ಡಮರುಗವು ಡಿಂಡಿಮಿಸೆ ತಾಂಡವವ ಮಾಡುತಲಿ

 ಸಮರಗಳ ಜಯಿಸಿದೆ ಅಪರಾಜಿತೆ

 ವಿಮಲಾಕ್ಷಿ ಮನವಿರಿಸು ಹರಿನೀಶ ಕೃಷ್ಣನಲಿ

 ಪವಿತ್ರ ಶಕ್ತಳೆ ಚಂಡಿ ವಿಪುಲ ಚರಿತೆ ||೨||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು