ಲಕುಮಿ ಬಂದಳು ನೋಡಿರೋ - Lakumi Bandalu Nodiro

|| ಲಕ್ಷ್ಮೀದೇವಿ ಸ್ತುತಿ ||




ಲಕುಮಿ ಬಂದಳು ನೋಡಿರೋ ನಮ್ಮನೆಗೆ 

ಝಣ ಝಣ ಕಾಂಚಾಣ ಬೀರುತಲಿ

ಹೊನ್ನಿನ ಮಳೆಯ ಸುರಿಸುತಲಿ

ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ವರಮಹಾಲಕ್ಷ್ಮಿ 

ಬಂದಳು ನೋಡಿರೋ ||ಪ||


ವೈಕುಂಠ ಪುರವಾಸಿಯೇ ದೇವೀ 

ನಾರಾಯಣನ ಅರಸಿಯೇ

ಆದಿಲಕ್ಷ್ಮಿಯೇ ನಮೋ ನಮೋ 

ಸೌಭಾಗ್ಯ ಲಕ್ಷ್ಮಿಯೇ ನಮೋ ನಮೋ

ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ವರಮಹಾಲಕ್ಷ್ಮಿ 

ಬಂದಳು ನೋಡಿರೋ ||೧||



ಕ್ಷೀರಸಾಗರ ಶೋಭಿತೇ ದೇವೀ ಕರಕಮಲ ವಿರಾಜಿತೇ

ಧಾನ್ಯಲಕ್ಷ್ಮಿಯೇ ನಮೋ ನಮೋ 

ಕನಕಾಂಬರಿಯೇ ನಮೋ ನಮೋ

ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ವರಮಹಾಲಕ್ಷ್ಮಿ 

ಬಂದಳು ನೋಡಿರೋ ||೨||


ನವಕೋಟಿ ಸಿರಿವಂತಳೇ ದೇವೀ 

ಜನಮನಕೆ ಅತಿ ಪ್ರೀತಳೇ

ಸಂತಾನ ಲಕ್ಷ್ಮಿಯೇ ನಮೋ ನಮೋ

ಧೈರ್ಯ ಲಕ್ಷ್ಮಿಯೇ ನಮೋ ನಮೋ

ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ವರಮಹಾಲಕ್ಷ್ಮಿ 

ಬಂದಳು ನೋಡಿರೋ ||೩||


ಬಾಳಲ್ಲಿ ಬೆಳಕಾಗಿ ಬಾ ದೇವೀ 

ಹರುಷದಲಿಕೃಪೆ ಮಾಡು ಬಾ 

ವಿಜಯಲಕ್ಷ್ಮಿಯೇ ನಮೋ ನಮೋ 

ವಿದ್ಯಾಲಕ್ಷ್ಮಿಯೇ ನಮೋ ನಮೋ

ಭಾಗ್ಯಲಕ್ಷ್ಮಿ ಧಾನ್ಯಲಕ್ಷ್ಮಿ ವರಮಹಾಲಕ್ಷ್ಮಿ 

ಬಂದಳು ನೋಡಿರೋ ||೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು