ನೀನೆ ಗತಿ ಮಾಧವ - Neene Gati Madhava

|| ಮಾಧವ ಸ್ತುತಿ ||




ನೀನೆ ಗತಿ ಮಾಧವ ದೇವರದೇವಾ||ಪ||

ನೀನೆ ಗತಿಯುಯನ್ನ ಮಾನಾಭಿಮಾನವ 

ಹಾನಿಗೊಳಿಸದನು ಮಾನವಿಲ್ಲದೆ ಕಾಯೋ|| ಅ.ಪ||


ಸಾಕಾರ ಸೌಭಾಗ್ಯವು ಸರ್ವವು ಸರ್ವ ಶೋಕಕೆ ಕಾರಣವು||

ಬೇಕಾದ ಕಡುರಸ ಶಾಕ ಪಾಕದರುಚಿ

ಶ್ರೀ ಕೃಷ್ಣ ನಿನ್ನಯ ನಾಮದಿಂದಲೇ ಕಾಂಬೆ||೧||


ಸಕಲ ಸಂಭ್ರಮವು ನಿನ್ನೆ ನಿನ್ನನುಯನ್ನ 

ಸಖನೆಂದು ನಂಬಿದೆನು||

ಸಕಲ ಚರಾಚರ ಪ್ರಾಣಿಗಳಿಗೆ ಸರ್ವ

ಸುಖ ದುಃಖ ಉಣಿಸುವ ಸಕಲ ತಂತ್ರನು ನೀನೆ||೨||


ಆದಿಮುರುತಿಯು ನೀನೆ ಧರ್ಮಾ ಧರ್ಮ

ಶೋಧಿಸುವವ ನೀನೆ||

ವೇದ ಗಮ್ಯನೇ ಎನ್ನಖೇದಮೋದವುನಿನ್ನ

ಪದಾಕರ್ಪಿಸಿದೆ ಗೋವಿಂದ ದಾಸನ ಕಾಯೋ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು