|| ದೇವಿ ಸ್ತುತಿ ||
ರಾಗ :- ಮಧ್ಯಮಾವತಿ
ತಾಳ :- ಆದಿ
|| ಭಾಗ್ಯದ ಲಕ್ಷ್ಮೀ ಬಾರಮ್ಮಾ |
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ ||
|| ಗೆಜ್ಜೆ ಕಾಲ್ಗಳಾ ದನಿಯ ತೋರುತಾ |
ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ||
ಸಜ್ಜನ ಸಾಧು ಪೂಜೆಯ ವೇಳೆಗೆ | ಮಜ್ಜಿಗೆಯೊಳಗಿನ | ಬೆಣ್ಣೆಯಂತೆ ||
|| ಭಾಗ್ಯದ ಲಕ್ಷ್ಮಿ ಬಾರಮ್ಮ ||
|| ಕನಕ ವೃಷ್ಠಿಯ ಕರೆಯುತ ಬಾರೆ | ಮನಕೆ ಮಾನವ | ಸಿದ್ಧಿಯ ತೋರೆ ||
ದಿನಕರ ಕೋಟಿ ತೇಜದಿ ಹೊಳೆಯುವ | ಜನಕರಾಯನ ಕುಮಾರಿ ಬೇಗ ||
|| ಭಾಗ್ಯದ ಲಕ್ಷ್ಮಿ ಬಾರಮ್ಮ ||
|| ಅತ್ತಿತ್ತಗಲದೆ ಭಕ್ತರ ಮನೆಯೊಳು | ನಿತ್ಯ ಮಹೋತ್ಸವ ನಿತ್ಯ ಸುಮಂಗಲ |
ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆವ ಪುತ್ಥಳಿ ಗೊಂಬೆ

0 ಕಾಮೆಂಟ್‌ಗಳು